ಸದ್ಗುರು ಕಾರುಣ್ಯವುಳ್ಳ ಭಕ್ತನ ಲಿಂಗ ಓಸರಿಸಿದರೆ
ವ್ರತಗೇಡಿಯೆಂದು ಕಳೆಯಬಾರದು, ಕೊಳಬಾರದು,
[ಮುಂದೆ] ಕಾರುಣ್ಯವುಂಟಾಗಿ:
"ಸುವ್ರತಂ ಸುಲಭಂ ಸಿದ್ಧಂ ಶತ್ರುಜಿತ್ ಶತ್ರುಪಾವನಃ" ಎಂದುದಾಗಿ,
'ಅಲಿಂಗೀ ಲಿಂಗರೂಪೇಣ ಯೋ ಲಿಂಗಮುಪಜೀವತಿ
ಸ ಪಚ್ಯತೇ ಮಹಾಘೋರೇ ನರಕೇ ಕಾಲಮಕ್ಷಯಮ್'
ಎಂದುದಾಗಿ,
ಶಸ್ತ್ರ, ಸಮಾಧಿ, ಜಲಾಂತ, ವನಾಂತ, ದಿಗ್ಭಲಿ, ದಹನ
ಈ ಆರರಲ್ಲಿ ಸತ್ತಡೆ
ಕೂಡಲಚೆನ್ನಸಂಗಯ್ಯನಲ್ಲಿ ಆತ ವ್ರತಗೇಡಿ.
Art
Manuscript
Music
Courtesy:
Transliteration
Sadguru kāruṇyavuḷḷa bhaktana liṅga ōsarisidare
vratagēḍiyendu kaḷeyabāradu, koḷabāradu,
[munde] kāruṇyavuṇṭāgi:
Suvrataṁ sulabhaṁ sid'dhaṁ śatrujit śatrupāvanaḥ endudāgi,
'aliṅgī liṅgarūpēṇa yō liṅgamupajīvati
sa pacyatē mahāghōrē narakē kālamakṣayam'
endudāgi,
śastra, samādhi, jalānta, vanānta, digbhali, dahana
ī āraralli sattaḍe
kūḍalacennasaṅgayyanalli āta vratagēḍi.
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲ