ಕೂಡಿ ಮಾಡಿದ ಸಯಿದಾನವ
ತಂದು ಪದಾರ್ಥವೆಂದು,
ಇಷ್ಟಲಿಂಗದಲ್ಲಿ ಪೂರ್ವಾಶ್ರಯ ಹೋಯಿತ್ತೆಂದು,
ಪ್ರಾಣಲಿಂಗಕ್ಕೆ ಓಗರವೆಂದು ನೀಡುತ್ತಿದ್ದರಯ್ಯಾ.
ಅಂಗದ ಕೈಯಲು ಅರ್ಪಿತವದೆ,
ಲಿಂಗದ ಕೈಯಲು ರುಚಿಯದೆ.
ಅಂಗದ ಕೈಯಾವುದು
ಲಿಂಗದ ಕೈಯಾವುದೆಂದರಿಯರು.
ಬೇರೆ ಮತ್ತೊಂದೆಂಬರು.
ಒಂದೆಂದರ್ಪಿಸಿ ಮತ್ತೊಂದೆಂದು ಭಾವಿಸಿದರೆ
ಹೊಂದಿದ ನೊಣವಿನಂತಾದರು,
ಕೂಡಲಚೆನ್ನಸಂಗನಲ್ಲಿ ಅವರ ಸಹಜರೆಂತೆಂಬೆ.
Art
Manuscript
Music
Courtesy:
Transliteration
Kūḍi māḍida sayidānava
tandu padārthavendu,
iṣṭaliṅgadalli pūrvāśraya hōyittendu,
prāṇaliṅgakke ōgaravendu nīḍuttiddarayyā.
Aṅgada kaiyalu arpitavade,
liṅgada kaiyalu ruciyade.
Aṅgada kaiyāvudu
liṅgada kaiyāvudendariyaru.
Bēre mattondembaru.
Ondendarpisi mattondendu bhāvisidare
hondida noṇavinantādaru,
kūḍalacennasaṅganalli avara sahajarentembe.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ