Index   ವಚನ - 442    Search  
 
ಆಹ್ವಾನಿಸುವಲ್ಲಿ ಪ್ರಾಣಲಿಂಗವಿಲ್ಲ, ವಿಸರ್ಜಿಸುವಲ್ಲಿ ಲಿಂಗವಂತರಿಸಿತ್ತು. ಆಹ್ವಾನಿಸುವನಲ್ಲ, ವಿಸರ್ಜಿಸುವನಲ್ಲ, ಶರಣನ ಪರಿ ಬೇರೆ. ಲಿಂಗಭೋಗೋಪಭೋಗವಲ್ಲದೆ, [ಅನರ್ಪಿತವ] ಭೋಗಿಸುವನಲ್ಲ. ಆಗಲೂ ಪ್ರಾಣಲಿಂಗಸಂಗದಲ್ಲಿಯೆ ಇಪ್ಪನು. ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ ನಮೋ ನಮೋ ಎಂಬೆ.