Index   ವಚನ - 449    Search  
 
ಲಿಂಗಪೂಜೆಯ, ಸ್ವಯಪೂಜೆಯ ನಾ ಮಾಡಿದೆನೆಂದೆನ್ನದ ಪ್ರಸಾದಿ. ಜಂಗಮಮಾಟದಲ್ಲಿ ನಾ ಮಾಡಿದೆನೆಂದು ಮನದಲ್ಲಿ ನೆನೆಯದ ಪ್ರಸಾದಿ. ದೂರದೂರದಲ್ಲಿ ಪರಾನುಸಂಗವಾದ ಪ್ರಸಾದಿ. ವಿಕಸಿತವಾದ ಒಂದೊಂದು ಭಾವದ ತನುವಿರಹಿತವಾದ ಪ್ರಸಾದ ಪ್ರಸಾದಿ. ಇದು ಕಾರಣ ಕೂಡಲಚೆನ್ನಸಂಗಯ್ಯಾ ಲಿಂಗ ಜಂಗಮ ಸನುಮತವಾದ ಪ್ರಸಾದಿ.