ಅಂಗದಾಪ್ಯಾಯನಕ್ಕೆ ಅರ್ಪಿತವ ಮಾಡುವನಲ್ಲ,
ಆತ ಲಿಂಗದಾಪ್ಯಾಯನಿಯಾದ ಕಾರಣ.
ಅಂಗಗುಣಂಗಳಳಿದು ಲಿಂಗದಲ್ಲಿ ನಿರ್ಲೇಪವಾದ ಶರಣ,
ಅರ್ಪಿತವನರಿಯ, ಅನರ್ಪಿತವನರಿಯ,
ಓಗರವನರಿಯ, ಪ್ರಸಾದವನರಿಯ,
ಇದು ಕಾರಣ ಕೂಡಲಚೆನ್ನಸಂಗಯ್ಯ,
ತಾನರುಹಿಸಿ ಕೊಟ್ಟು, ತನ್ನ ಕಾರುಣ್ಯ
ಪ್ರಸಾದವನಿಕ್ಕಿ ಸಲಹಿದನಾಗಿ,
ಆನೇನೆಂದರಿಯೆನಯ್ಯಾ.