Index   ವಚನ - 456    Search  
 
ಇದೇನಯ್ಯಾ ಪ್ರಸಾದ ಒಡನೆ ನ[ಡೆ]ವುತ್ತಿದೆ, ಇದೇನಯ್ಯಾ ಪ್ರಸಾದ ಒಡನೆ ನುಡಿವುತ್ತಿದೆ, ಪ್ರಾಣದ ಮೇಲೆ ಲಿಂಗ ಪ್ರತಿಷ್ಠೆಯಾಗಲೊಡನೆ ಅದು ತಾನೆ ನಡೆವುದು, ಅದು ತಾನೆ ನುಡಿವುದು, ಕಂಡಯ್ಯಾ. ಎರಡೆಂಬುದಿಲ್ಲಾಗಿ ಮುಂದೆ ನಾನೊಂದೆ ಕೂಡಲಚೆನ್ನಸಂಗಮದೇವಾ.