Index   ವಚನ - 468    Search  
 
ಆಧಾರವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ, ಅಧೇಯವುಳ್ಳನ್ನಕ್ಕ ಲಿಂಗಪ್ರಾಣಿಯಲ್ಲ. ಇಷ್ಟಲಿಂಗದ ಕಷ್ಟಪೂಜಕರೆಲ್ಲರೂ ಆ ದೃಷ್ಟಲಿಂಗದ ಘನವ ತಾವೆತ್ತ ಬಲ್ಲರು? ಇಷ್ಟದ ಕಷ್ಟವು ನಷ್ಟವಾದರೆ ಕೂಡಲಚೆನ್ನಸಂಗನೆಂಬುದೇ ದೃಷ್ಟ.