Index   ವಚನ - 494    Search  
 
ಕಕ್ಷೆ ಕರಸ್ಥಳ ಕಂಠ ಉತ್ತಮಾಂಗ ಮುಖಸೆಜ್ಜೆ ಅಂಗಸೋಂಕೆಂಬಿವು ಬಹಿರಂಗದ ಶೃಂಗಾರ. ಬ್ರಹ್ಮರಂಧ್ರ ಭ್ರೂಮಧ್ಯ ನಾಸಿಕಾಗ್ರ ಚೌಕಮಧ್ಯವೆಂಬಿವು ಅಂತರಂಗದ ಶೃಂಗಾರ. ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ, ನಾಸಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ. ಇಂತೀ ಚತುರ್ವಿಧ ಸಾಹಿತ್ಯವಾಗಿ ನೋಡಿತ್ತೇ ಪಾವನ, ಮುಟ್ಟಿತ್ತೇ ಅರ್ಪಿತ ಕೂಡಲಚೆನ್ನಸಂಗಮದೇವಾ.