Index   ವಚನ - 500    Search  
 
ಇನಿಗಡಲ ಅಣುಗನ ಕೂಡಿದ ಪತಂಗನು ತಾಮಸದಿವಸವ ಮರೆದಂತೆ. ಸತ್ತ್ವಗುಣ ರಜದಲಡಗಿ, ರಜದ ಗುಣ ತಮದಲಡಗಿ, ತಮದ ಗುಣ ರುದ್ರನೊಳಡಗಿ. ರುದ್ರನ ಗುಣ ಅಕ್ಷರಾಕ್ಷರ ಪರಶಿವನೊಳಡಗಿ, "ಅಕ್ಷರಾಣಿ ಚ ಮಾತ್ರಾಣಿ ಸರ್ವೇ ಬಿಂದುಸಮಾಶ್ರಿತಾಃ| ಬಿಂದುರ್ಭಿದ್ಯತೇ ನಾದಾತ್ ಸುನಾದಸ್ತೇನಭಿದ್ಯತೇ‌"|| ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಬಲ್ಲನಲ್ಲದೆ, ಅಜ್ಞಾನಿಗಳೆತ್ತ ಬಲ್ಲರು.