Index   ವಚನ - 501    Search  
 
ರೇಚಕ ಪೂರಕ ಕುಂಭಕವೆಂಬ ಗರುಡವಾಯುವ ಸೋಂಕ ತೆಗೆದು, ಬ್ರಹ್ಮಾಂಡದಲ್ಲಿ ಕೀಲಿಟ್ಟು, ದ್ವಾರಕವಾಟವನೆ ತೆರೆದು, ಆಂದೋಳಿಸುತ್ತಿದ್ದಿತ್ತು, ಪರಶಿವಯೋಗ. ಬಾಲ ಕುಮಾರ ಪ್ರೌಢ ಭಾಗದಲ್ಲಿ ಕಾಳಂ ಪೊಕ್ಕಿತ್ತು. ಕಾಳಾಂದರದಿಂದತ್ತತ್ತಲಾರು ಬಲ್ಲರೋ? ಅಪ್ಪಿನ ಘಟ ಹೊತ್ತುಕೊಂಡು ಸುಳಿದ ಜಗದೊಳಗೆ, ಅದು ಬಿರಿಬಿರಿದು ನಿರಾಳದಲ್ಲಿ ನೆರೆವ ಭೇದವ, ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯರನುವ ಆ ಲಿಂಗೈಕ್ಯರೆ ಬಲ್ಲರು.