Index   ವಚನ - 503    Search  
 
ಕಾಯವೆ ಶಿವಾಲ್ಯ, ಕಮಳಮಧ್ಯಮಂಟಪವು ಶುಕನಾಶಿ ನೋಡಾ ಅಯ್ಯಾ. ಜ್ಞಾನಾರೂಢ ಪ್ರಾಣೇಶ್ವರನೆಂಬಾತನಲ್ಲಿಯ ದೇವನು. ಒಂಬತ್ತು ಮಾನಿಸರು ತಂಡಾಲೆಯರು; ಇಂಬಿನ ಮಠಪತಿ ಹಂಸಜೀಯ, ತನ್ನ ದಳವಳಯವನೊಲ್ಲದೆ ಲಿಂಗವೆ ಗೂಡಾದನು, ಕೂಡಲಚೆನ್ನಸಂಗಯ್ಯನೆಂಬ ನಿಶ್ಚಿಂತ ನಿಜೈಕ್ಯನು.