Index   ವಚನ - 502    Search  
 
ಮಂದಾರಸ್ಥಾನ ಮೊದಲಾದ ಆರರ ಕಡೆಯ ಸ್ವಾದೋದಕಸಮುದ್ರದಲ್ಲಿ ವಿಶ್ರಮಿಸಿದ, ಇಕ್ಷುಸಮುದ್ರದಲ್ಲಿ ತೃಪ್ತನಾಗಿ ಮೇರುಮಂದಿರದಲಿ ಮುಗ್ಧನಾದ ಕಾಣಾ ಕೂಡಲಚೆನ್ನಸಂಗಾ, ನಿಮ್ಮ ಶರಣ.