Index   ವಚನ - 510    Search  
 
ಕರಸ್ಥಲ ಸೆಜ್ಜೆಯಾದ ಶರಣನು ಹೊನ್ನಿಗೆ ಕೈಯಾಂತಡದು ಕರಸ್ಥಳವಲ್ಲ, ಅದು ಕರ್ಮಸ್ಥಳ. ಅಂಗಸೋಂಕು ಸೆಜ್ಜೆಯಾದ ಶರಣನು ಅಪ್ಪಿನ ಸೋಂಕಿನ ಸುಖಕ್ಕೆ ಅಂಗೈಸಿದನಾದರೆ ಅದು ಅಂಗಸೋಂಕಲ್ಲ, ಅದು ಕರ್ಮಸೋಂಕು. ಮುಖ ಸೆಜ್ಜೆಯಾದ ಶರಣನು ಹುಸಿ ನುಸುಳು ಬಂದಡದು ಮುಖ ಸೆಜ್ಜೆಯಲ್ಲಿ ಕರ್ಮಸೆಜ್ಜೆಲ್ಲ. ಉತ್ತಮಾಂಗ ಸೆಜ್ಜೆಯಾದ ಶರಣನು ಪೂರ್ವಲಿಖಿತವನುಂಬಡದು ಉತ್ತಮಾಂಗವಲ್ಲ, ಅದು ಕರ್ಮಾಂಗ. ಅಮಳೋಕ್ಯ ಸೆಜ್ಜೆಯಾದ ಶರಣನು ಅನ್ನಪಾನಕ್ಕೆ ಬಾಯಿದೆರೆದಂದಂದಿಂಗೆ ವ್ರತಗೇಡಿ ಕೂಡಲಚೆನ್ನಸಂಗಮದೇವಾ.