Index   ವಚನ - 511    Search  
 
ವಸ್ತ್ರ ಬಲುಹಿನಲ್ಲಿ ಕಟ್ಟು, ಸೆಜ್ಜೆಯ ಬಲುಹಿನಲ್ಲಿ ಕಟ್ಟು. ಶಿವದಾರವ ಬಲುಹಿನಲ್ಲಿ ಕಟ್ಟೆಂದು ಹೇಳೂದು ಉಪದೇಶವೆ? ಮತ್ತೆ ಕಟ್ಟುವ ಠಾವುಂಟಾಗಿ, ಅಷ್ಟವಿಧಾರ್ಚನೆ, ಷೋಡಶೋಪಚಾರ, ಕಾಲನೇಮವೆಂದು ಹೇಳೂದು ದೀಕ್ಷೆಯೆ? ಮತ್ತೆ ಕಾಲನೇಮವುಂಟಾಗಿ, ಇದನರಿಯದೆ ಹೇಳಿದಾತ ಶಿವದ್ರೋಹಿ. ಕೇಳಿದಾತ ಗುರುದ್ರೋಹಿ. ಐಕ್ಯವಿಲ್ಲದ ಮಾಟ, ಸಯಿದಾನದ ಕೇಡು. ಕೂಡಲಚೆನ್ನಸಂಗಯ್ಯಾ ಆ ಗುರುಶಿಷ್ಯರಿಬ್ಬರೂ ಉಭಯಭ್ರಷ್ಟರು.