Index   ವಚನ - 514    Search  
 
ಅರ್ಥ ಪ್ರಾಣ ಅಭಿಮಾನ ಭಕ್ತಂಗೆ ಹೊಲ್ಲದೆಂಬರು, ತಮ್ಮ ಹೊದ್ದಿದ ಮಲಿನವನರಿಯರು. ಕರುಳು ಕೊಳ್ಳದ ಉದಾನವ ಮರಳಿ ಅರ್ಪಿತವೆಂದು ಕೊಳಬಹುದೆ? ಬೇಡುವಾತ ಜಂಗಮವಲ್ಲ, ಮಾಡುವಾತ ಭಕ್ತನಲ್ಲ. ಬೇಡದ ಮುನ್ನವೆ ಮಾಡಬಲ್ಲರೆ ಭಕ್ತ. ಬೇಡಿ ಮಾಡಿಸಿಕೊಂಬನ್ನಬರ ಜಂಗಮವಲ್ಲ. ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ. ಇದು ಕಾರಣ, ಕೂಡಲ ಚೆನ್ನಸಂಗಯ್ಯನಲ್ಲಿ ಮಾಡುವ ಭಕ್ತ, ಬೇಡದ ಜಂಗಮವಪೂರ್ವ.