ಆದ್ಯರ ವಚನವೇನು ಬಟ್ಟೆಯ ಸಂಬಳವೆ?
ಮನೆ ಮನೆಯ ಹೊಕ್ಕು ಬೋಧಿಸುವಂತಾಗಿ,
ಮನೆ ಮನೆಯ ಹೊಕ್ಕು ಮೆಚ್ಚಿಸುವಂತಾಗಿ,
ಇದು ಭಕ್ತಿಸ್ಥಲವೆ? ಇದು ಜಂಗಮಸ್ಥಲವೆ?
ಭಕ್ತನಾದರೆ ಭೃತ್ಯನಾಗಿರಬೇಕು.
ಈ ಎರಡೂ ಇಲ್ಲದ ಎಡೆಹಂಚರ ತೋರಿಸದಿರು
ಕೂಡಲಚೆನ್ನಸಂಗಮದೇವಾ.
Art
Manuscript
Music Courtesy:
Video
TransliterationĀdyara vacanavēnu baṭṭeya sambaḷave?
Mane maneya hokku bōdhisuvantāgi,
mane maneya hokku meccisuvantāgi,
idu bhaktisthalave? Idu jaṅgamasthalave?
Bhaktanādare bhr̥tyanāgirabēku.
Ī eraḍū illada eḍ'̔ehan̄cara tōrisadiru
kūḍalacennasaṅgamadēvā.