Index   ವಚನ - 532    Search  
 
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯ ಸಂಗ ಮತ್ತೇಕಯ್ಯಾ? ಕಾಮನು ಬಾಣವಕೊಂಡು, ತನು ತನುಮುಖಕ್ಕೆ ಎಚ್ಚರೆ ಭವಿ ಬಳಿಕವುಂಟು ನೋಡಾ! ಕಾಮನ ಬಾಣವ ಮುರಿದು ಮಾಯದ ಸಂಚವ ಕೆಡಿಸಿ ಎನಗೆ ತನಗೆಂಬುದಳಿದ ಬಳಿಕ ಲಿಂಗಸಂಗಿ ಶರಣನಾಗಿಪ್ಪನು. ಭವ ಬಳಿಕೆಲ್ಲಿಯದೊ? ಅಂತರಂಗದ ಅನುಭವವರಿದು ಮನದ ಆಗು ಹೋಗಬಲ್ಲರೆ, ಕೂಡಲಚೆನ್ನಸಂಗನಲ್ಲಿ ಲಿಂಗಸಂಗಿ ಶರಣನಾಗಿಪ್ಪನು.