Index   ವಚನ - 537    Search  
 
ಶಿವಯೋಗ ನಿಭ್ರಾಂತ ಶರಣ. ಕರ್ಮಕಾಯನು ಅಲ್ಲ, ಕಾಲಕಲ್ಪಿತನಲ್ಲ ಶರಣನು. ಸಂಕಲ್ಪ ವಿಕಲ್ಪ ವಿರಹಿತನಾಗಿ ಅವರವರ ಬೆರಸಿಪ್ಪ, ತನ್ನ ಪರಿ ಬೇರೆ, ನಿರಂತರಸುಖಿ, ಕೂಡಲಚೆನ್ನಸಂಗಾ ಪ್ರಪಂಚಿನೊಳಗಿಪ್ಪ, ತನ್ನ ಪರಿ ಬೇರೆ.