Index   ವಚನ - 538    Search  
 
ಸಂಗವಿಡಿದಂತೆ ಸಂಗವಿಡಿದು ನೋಡದಿರ. ಶರಣ ಸಂಗಸೂತಕಿಯಲ್ಲ, ಲಿಂಗಪರಿಚಿತ. ಸಂಗವಂತನೆಂದೆನ್ನದಿರು, ಶರಣ ಮನಬಂದಂತೆ ಮಾಡುವ. ಅರಸಿ ಸಕಳಾಗಮಾಚಾರ್ಯನಪ್ಪ, ಅಹುದಾಗದೆಂಬುದಿಲ್ಲ ನೋಡಾ. ಕೂಡಲಚೆನ್ನಸಂಗನ ಶರಣ ಸಂಗಿಯಲ್ಲ.