Index   ವಚನ - 289    Search  
 
ಬಯಲು ಲಿಂಗವೆಂಬೆನೆ? ಬಗಿದು ನಡೆವಲ್ಲಿ ಹೋಯಿತ್ತು. ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು . ತರುಮರಾದಿಗಳು ಲಿಂಗವೆಂಬೆನೆ?ತರಿದಲ್ಲಿ ಹೋಯಿತ್ತು. ಲಿಂಗ ಜಂಗಮದ ಪಾದವೇ ಗತಿಯೆಂದು ನಂಬಿದ ಸಂಗನಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯಾ.