Index   ವಚನ - 550    Search  
 
ಅರಸನಾ(ಳುವ)ಗ್ರಾಮ ಪುರ ಪಟ್ಟಣದೊಳಗೆ ತಾನಿದ್ದು ಸೀಮೆ ನಿಸ್ಸೀಮೆ ಇದೇನಯ್ಯಾ? ಬಂಧ ನಿರ್ಬಂಧವಿಲ್ಲಾಗಿ ಶರಣಂಗೆ ಸಂದು ಸಾಧನ ಸಂಶಯವುಂಟೆ? ಎಡೆಗೆ ಕಡೆಯುಂಟೆ? ಅಗುಸೆಯಲ್ಲಿ ಹೋಗುವನೆ? ಚೋರಖಂಡಿಯಲ್ಲಿ ನುಸುಳುವನೆ? ಇದು ಕಾರಣ ಕೂಡಲಚೆನ್ನಸಂಗಾ. ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ.