Index   ವಚನ - 549    Search  
 
ಶರಣನು ಅದೃಷ್ಟ ದೃಷ್ಟ ಎರಡುವನೂ ತೋರುವನು. ಸಾವಯ ನಿರವಯ ಏನೆಂದು ವಿವರಿಸ ಶರಣನು. ತಾನು ಸ್ವತಂತ್ರನಾಗಿ ಭಾವರಹಿತನು. ವಿಕೃತವೇಷದಿಂದ ಸುಕೃತವ ಜೋಡಿಪನಲ್ಲ. ಪ್ರಕೃತಿಗುಣವಿಡಿದು ಮೂರ್ತಿಯಾದ ಉಪಜೀವಿ ತಾನಲ್ಲ, ಕೂಡಲಚೆನ್ನಸಂಗಾ ಅನಿತ್ಯ ಮಿಥ್ಯವ ಕಳೆದು ನಿತ್ಯನಾದ ಶರಣ.