ಲಿಂಗಭಾಜನದಲ್ಲಿ ಸಹಭೋಜನವ
ಮಾಡಿಹೆವೆಂದೆಂಬರು,
ಲಿಂಗಭಾಜನದಲ್ಲಿ ಸಹಭೋಜನವ
ಮಾಡುವವರ ನೋಡಿರೇ.
ಲಿಂಗವಂತರೆಲ್ಲಾ ಕಾಮ ಕ್ರೋಧ ಲೋಭ
ಮೋಹ ಮದ ಮತ್ಸರ ಆಸೆವುಳ್ಳನ್ನಕ್ಕ
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಪರಿಯೆಂತೊ?
ಹಸಿವು ತೃಷೆ ನಿದ್ರೆ ಆಲಸ್ಯ ವ್ಯಸನವುಳ್ಳನ್ನಕ್ಕ,
[ಲಿಂಗಭಾಜನದಲ್ಲಿ ಸಹಭೋಜನವ
ಮಾಡುವ ಪರಿಯೆಂತೊ?]
ಗುರುಲಿಂಗಜಂಗಮ ತ್ರಿವಿಧಸಂಪನ್ನತೆವುಳ್ಳನ್ನಕ್ಕ,
ಲಿಂಗಭಾಜನದಲ್ಲಿ ಸಹಭೋಜನವ ಮಾಡುವ ಜ್ಞಾನಿಗಳು
ತಾವೇ ಲಿಂಗವೆಂಬರು, ಲಿಂಗವೇ ತಾವೆಂಬರು.
ತಾವೆ ಲಿಂಗವಾದರೆ ಜನನ ಮರಣ ರುಜೆ
ತಾಗು ನಿರೋಧವಿಲ್ಲದಿರಬೇಡಾ?
ಮಹಾಜ್ಞಾನವ ಬಲ್ಲೆವೆಂದು
ತಮ್ಮ ಭಾಜನದಲ್ಲಿ ಲಿಂಗಕ್ಕೆ ನೀಡುವ
ಪಾತಕರ ತೋರದಿರು,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Liṅgabhājanadalli sahabhōjanava
māḍ'̔ihevendembaru,
liṅgabhājanadalli sahabhōjanava
māḍuvavara nōḍirē.
Liṅgavantarellā kāma krōdha lōbha
mōha mada matsara āsevuḷḷannakka
liṅgabhājanadalli sahabhōjanava māḍuva pariyento?
Hasivu tr̥ṣe nidre ālasya vyasanavuḷḷannakka,
[liṅgabhājanadalli sahabhōjanava
māḍuva pariyento?]
Guruliṅgajaṅgama trividhasampannatevuḷḷannakka,
liṅgabhājanadalli sahabhōjanava māḍuva jñānigaḷu
tāvē liṅgavembaru, liṅgavē tāvembaru.
Tāve liṅgavādare janana maraṇa ruje
tāgu nirōdhavilladirabēḍā?
Mahājñānava ballevendu
tam'ma bhājanadalli liṅgakke nīḍuva
pātakara tōradiru,
kūḍalacennasaṅgamadēvā.