Index   ವಚನ - 600    Search  
 
ಶೀಲವಾದಡೆ ಪ್ರಪಂಚು ನಾಸ್ತಿಯಾಗಿರಬೇಕು, ಸೀಮೆಯಾದಡೆ ಪಂಚೇಂದ್ರಿಯ ನಾಸ್ತಿಯಾಗಿರಬೇಕು, ಸೀಮೆಯಾದಲ್ಲದೆ ಭಕ್ತನೆನಿಸಬಾರದು, ಶೀಲವಾದಲ್ಲದೆ ಶರಣನೆನಿಸಬಾರದು, ಶೀಲಕ್ಕೆ ಭವಿನಾಸ್ತಿ, ಸೀಮೆಗೆ ಭವಂ ನಾಸ್ತಿ, ಈ ದ್ವಿವಿಧನಾಸ್ತಿಯಾದಲ್ಲದೆ ಕೂಡಲಚೆನ್ನಸಂಗನಲ್ಲಿ ಶೀಲವಂತನೆಂದೆನಿಸಬಾರದು.