Index   ವಚನ - 602    Search  
 
ಶೀಲವಂತರು ಶೀಲವಂತರೆಂದೆಂಬರು, ಶೀಲ ಸಂಬಂಧದ ಹೊಲಬನರಿಯದ ಭ್ರಮಿತ ಪ್ರಾಣಿಗಳು ನೀವು ಕೇಳಿ ಭೋ. ಕಾಮವೆಂಬುದೊಂದು ಪಾಪಿ, ಮದವೆಂಬುದೊಂದು ದ್ರೋಹಿ, ಮತ್ಸರವೆಂಬುದೊಂದು ಹೊಲೆಯ, ಕ್ರೋಧವೆಂಬುದೊಂದು ಕೈಸೂನೆಗಾರ, ಮನವ್ಯಾಪಕಂಗಳು ಭವಿ. ಇಂತಿವನರಿದು ಮರೆದು ಹರವಸಂಭೋಗಿ ಹೊಯಿ ಹಡೆದಂತಿದ್ದರೆ ಕೂಡಲಚೆನ್ನಸಂಗನಲ್ಲಿ ಅವರ ಲಿಂಗವಂತರೆಂಬೆ.