Index   ವಚನ - 603    Search  
 
ಅಗ್ಘಣಿ ಮೀಸಲಾಗಬೇಕೆಂಬುದು ಶೀಲವೆ? ಪುಷ್ಪ ಮೀಸಲಾಗಬೇಕೆಂಬುದು ಶೀಲವೆ? ಓಗರ ಮೀಸಲಾಗಬೇಕೆಂಬುದು ಶೀಲವೆ? ಇವು ಶೀಲವಲ್ಲ ಕಾಣಿರಯ್ಯಾ! ಪಂಚೇಂದ್ರಿಯ ಷಡ್ವರ್ಗ ಸಪ್ತಧಾತು ಅಷ್ಟಮದಂಗಳ ಕಳೆಯಬಲ್ಲಡೆ ಕೂಡಲಚೆನ್ನಸಂಗನಲ್ಲಿ ಅಚ್ಚಶೀಲ.