Index   ವಚನ - 604    Search  
 
ನದಿ ಕೂಪ ತಟಾಕ ಜಲದಲ್ಲಿ ಕನ್ನವನ್ನಿಕ್ಕಿ ಉದಕವ ತಂದು, ಮಜ್ಜನಕ್ಕೆರೆವವರು ಸುಯಿಧಾನಿಗಳಪ್ಪರೆ? ಪಾಕದಲ್ಲಿ ಭವಿಪಾಕ ಪರಪಾಕವೆಂದು ಭುಂಜಿಸುವ ಉದರಪೋಷಕರೆಲ್ಲಾ ಶೀಲವಂತರಪ್ಪರೆ? ಅಲ್ಲ. ಆಸೆಯರತು, ವ್ಯಸನ ಬೆಂದು, ವ್ಯಾಪ್ತಿಗಳೆಲ್ಲವು ತಲ್ಲೀಯವಾಗಿ, ತನುಗುಣಾದಿಗಳೆಲ್ಲಾ ಸಮಾಪ್ತಿಯಾದಡೆ ಕೂಡಲಚೆನ್ನಸಂಗನಲ್ಲಿ ಶೀಲವಂತರೆಂಬೆ.