Index   ವಚನ - 608    Search  
 
ಏನೆಂಬೆನಯ್ಯ? ಕಲ್ಪಿತ ಬಂಧನ ಬಿಡದು, ಪ್ರಸಾದಕ್ಕೆಂತೊ? ಗಮನಶಂಕೆ ಬಿಡದು, ಪ್ರಾಣಲಿಂಗಕ್ಕೆಂತೊ? ನಿಜತುಂಬಿ ನಿಕ್ಷೇಪವಾಗದು. ಇದು ಕಾರಣ, ಅರ್ಪಿತವುಳ್ಳನ್ನಕ್ಕ ಪ್ರಸಾದಿಯಲ್ಲ. ಅವಧಾನವುಳ್ಳನ್ನಕ್ಕ ಪ್ರಾಣಲಿಂಗಿಯಲ್ಲ, ಕೂಡಲಚೆನ್ನಸಂಗಯ್ಯ.