Index   ವಚನ - 611    Search  
 
ಆನು ಮಾಡಲು ಗುರುವಾದನಲ್ಲದೆ, ಗುರು ಮಾಡಲು ನಾನಾದೆನೆ? ಗುರು ಮಾಡಲು ಲಿಂಗವಾಯಿತ್ತಲ್ಲದೆ, ಲಿಂಗ ಮಾಡಲು ಗುರುವಾದನೆ? ಇಂತೀ ಉಭಯ ಕುಳಸ್ಥಳವನು ಕೂಡಲಚೆನ್ನಸಂಗನ ಶರಣ ಬಲ್ಲನಲ್ಲದೆ ಎಲ್ಲರೂ ಎತ್ತ ಬಲ್ಲರು.