ಕಾಯ ಪ್ರಸಾದವೊ, ಜೀವ ಪ್ರಸಾದವೊ,
ಪ್ರಾಣ ಪ್ರಸಾದವೊ? ಬಲ್ಲವರು ನೀವು ಹೇಳಿರೆ.
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂದು
ಹೆಸರಿಟ್ಟುಕೊಂಡು ಕರೆವಿರಿ,
ಕಾಯವ ಕಳೆದು ಕಾಯಪ್ರಸಾದವೊ,
ಜೀವವ ಕಳೆದು ಜೀವಪ್ರಸಾದವೊ,
ಪ್ರಾಣವ ಕಳೆದು ಪ್ರಾಣಪ್ರಸಾದವೊ?
ಇಂತಿವನುತ್ತರಿಸಿದ ಮಹಾಪ್ರಸಾದವನಲ್ಲದೆ ಕೊಳ್ಳೆ.
ರಂಜಕಪ್ರಸಾದಕಾನಂಜುವೆ
ಕೂಡಲಚೆನ್ನಸಂಗಮದೇವಾ,