Index   ವಚನ - 633    Search  
 
ಗುರು ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ ಅದೇನು ಕಾರಣ? ಅನಾದಿ ಲಿಂಗವ ತೋರಲರಿಯನಾಗಿ, ಲಿಂಗ ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ, ಅದೇನು ಕಾರಣ? ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೊಳಗಾಯಿತ್ತಾಗಿ. ಜಂಗಮ ಮುಟ್ಟಿತ್ತು ಪ್ರಸಾದವೆಂಬೆನೆ? ಅಲ್ಲ. ಅದೇನು ಕಾರಣ? ಆಸೆಯಾಮಿಷಕ್ಕೊಳಗಾಗಿತ್ತಾಗಿ ಲಿಂಗವಿಲ್ಲದ ಜಂಗಮ, ಜಂಗಮವಿಲ್ಲದ ಲಿಂಗ, ಲಿಂಗಜಂಗಮವೆಂಬ ವಿಭೇದವ ಕಳೆದುಳಿದ ಪ್ರಸಾದಿಯ ಎನಗೆ ತೋರಾ ಕೂಡಲಚೆನ್ನಸಂಗಮದೇವಾ.