Index   ವಚನ - 634    Search  
 
ಶಿಷ್ಯನ ಮುಖದಿಂದಾದ ಗುರುವಿಂಗೆ ಶಿಷ್ಯನ ಪ್ರಸಾದ ಗುರುವಿಂಗಲ್ಲದೆ, ಗುರುವಿನ ಪ್ರಸಾದ ಶಿಷ್ಯಂಗಿಲ್ಲ,ಇದಕ್ಕಾ ಗುರುವೆ ಸಾಕ್ಷಿ. ಶರಣನ ಮುಖದಿಂದಾದ ಲಿಂಗಕ್ಕೆ ಶರಣನ ಪ್ರಸಾದ ಲಿಂಗಕ್ಕೆ ಅಲ್ಲದೆ, ಲಿಂಗಪ್ರಸಾದ ಶರಣಂಗಿಲ್ಲ, ಇದಕ್ಕಾ ಲಿಂಗವೆ ಸಾಕ್ಷಿ. ಭಕ್ತನ ಮುಖದಿಂದಾದ ಜಂಗಮಕ್ಕೆ ಭಕ್ತನ ಪ್ರಸಾದ ಜಂಗಮಕ್ಕಲ್ಲದೆ, ಜಂಗಮಪ್ರಸಾದ ಭಕ್ತಂಗಿಲ್ಲ, ಇದಕ್ಕಾ ಜಂಗಮವೆ ಸಾಕ್ಷಿ. ಇದು ಕಾರಣ, ಕೂಡಲಚೆನ್ನಸಂಗಮದೇವಾ ಈ ತ್ರಿವಿಧದನುಭಾವವ ಬಸವಣ್ಣ ಬಲ್ಲ.