Index   ವಚನ - 636    Search  
 
ದಶವಿಧ ಉದಕ, ಏಕಾದಶ ಪ್ರಸಾದ, ಎಲ್ಲಾ ಎಡೆಯಲ್ಲಿ ಉಂಟು. ಮತ್ತೊಂದ ಬಲ್ಲವರ ತೋರಾ ಎನಗೆ. ಲಿಂಗವ ನೆನೆಯದೆ, ಲಿಂಗಾರ್ಪಿತವ ಮಾಡದೆ, ಅನರ್ಪಿತವ ಕೊಳ್ಳದ ಅಚ್ಚಪ್ರಸಾದಿಯ ತೋರಿ ಬದುಕಿಸಯ್ಯಾ ಕೂಡಲಚೆನ್ನಸಂಗಮದೇವಾ.