Index   ವಚನ - 650    Search  
 
ರೂಪನರ್ಪಿತವ ಮಾಡಿದ ಬಳಿಕ ರುಚಿಯನರ್ಪಿತವ ಮಾಡಲೇಬೇಕು, ರುಚಿಯನರ್ಪಿತವ ಮಾಡಿದ ಬಳಿಕ ಮುಟ್ಟಿದಕೈ ವ್ರತಗೇಡಿಯಾಗಲೇಬೇಕು. ಕೂಡಲಚೆನ್ನಸಂಗಯ್ಯಾ ನಿಮ್ಮ ಪ್ರಸಾದಿಗೆ ನಮೋ ನಮೋ ಎಂಬೆ.