ಸಾವ ಜೀವ ಬಿಂದುವಿನ ಸಂಚ,
ಸಾಯದ ನಾದ ಪ್ರಾಣದ ಸಂಚ.
ಸಾವ ಜೀವದ, ಸಾಯದ ಪ್ರಾಣದ,
ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ,
ಸಾವ ಜೀವದ, ಸಾಯದ ಪ್ರಾಣದ
ಎರಡರ ಭೇದವ ಭೇದಿಸಿ
ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ.
ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು.
ಇಂತೀ ಉಭಯ ಸಂಬಂಧವಳಿದ
ಸಂಬಂಧ ನಿಜವಾಯಿತ್ತು,
ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
Art
Manuscript
Music
Courtesy:
Transliteration
Sāva jīva binduvina san̄ca,
sāyada nāda prāṇada san̄ca.
Sāva jīvada, sāyada prāṇada,
eraḍara bhēdavanariyadirdaḍe lān̄chanadhāri,
sāva jīvada, sāyada prāṇada
eraḍara bhēdava bhēdisi
arivu kaṇdereda prāṇaliṅgasambandhavantirali.
Matteyū prāṇaliṅgasambandhavē bēku.
Intī ubhaya sambandhavaḷida
sambandha nijavāyittu,
kūḍalacennasaṅgā nim'ma śaraṇaṅge
ಸ್ಥಲ -
ಶರಣನ ಪ್ರಾಣಲಿಂಗಿಸ್ಥಲ