Index   ವಚನ - 695    Search  
 
ಉದ್ಭ್ರಮಿಯಲ್ಲ, ಉದ್ದೇಶಿಯಲ್ಲ, ನಿದ್ರೆಗೆಟ್ಟವನು, ನಿಜವನೆ ಬೆಳಗುತಿಪ್ಪ ನಿಶ್ಚಿಂತ ಶರಣ. ಚಿಂತೆಗೆಟ್ಟು ಸ್ಥಿರವಾಗಿ ನಿಂದ, ಸೀಮೆಯ ಕೆಡಿಸಿ ನಿಸ್ಸೀಮನಾದ, ಬೋಧೆಯ ಕೆಡಿಸಿ ನಿರ್ಬೋಧಿಯಾದ, ಕಾಯವ ಕೆಡಿಸಿ ಕರ್ಮಾದಿ ಗುಣರಹಿತನಾದ, ಆಶೆಯ ಕೆಡಿಸಿ ನಿರಾ[ಶಕ]ನಾಗಿ ತನ್ನ ಮರೆದ, ಇದು ಕಾರಣ, ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ ಆರೂ ಸರಿಯಿಲ್ಲ.