Index   ವಚನ - 697    Search  
 
ಹತ್ತರಲೊಂದು ಕಳೆದು ಅರುವತ್ತಾಯಿತ್ತು. ಸಪ್ತಕ ಸಾಧಿಸಲಾರ ವಶವಲ್ಲ, ಶಶಿ ಸೂರ್ಯರ ವಶವಲ್ಲ, ದಶಕೋಟಿಯೆಯ್ದೆ ಅಳಿದುದು. ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಹತ್ತರ ಮೇಲೆ ಹನ್ನೊಂದರಂತಿದ್ದೆನಯ್ಯಾ.