Index   ವಚನ - 741    Search  
 
ಪ್ರಸಾದ ಮುಖದಲ್ಲಿ ಕಲ್ಪಿತ, ಲಿಂಗಮುಖದಲ್ಲಿ ಸಂಕಲ್ಪಿತ. ಜಂಗಮಮುಖದಲ್ಲಿ ಸಂದೇಹಿ, ಗುರುಮುಖದಲ್ಲಿ ಸಮಾಪ್ತಿ. ಇಂತೀ ಚತುರ್ವಿಧವನೇಕಾರ್ಥವ ಮಾಡಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯವು.