Index   ವಚನ - 752    Search  
 
ಆಚಾರವೆಂಬ ಬಿಲ್ಲಿಗೆ ವಿಚಾರವೆಂಬ ನಾರಿ, ಸಮತೆಯೆಂಬ ತಿರುವ ಮೆಟ್ಟಿ ಜೇವೊಡೆಗೆಯ್ದು, ಶಿಷ್ಯನೆಂಬ ಬಾಣವ ತೊಡಚಿ, ಗುರುವೆಂಬ ವ್ಯಾಧನು ಲಿಂಗವೆಂಬ ಬಯಲ ಗುರಿಯನೆಚ್ಚಡೆ, ಗರಿ ತೋರದಂತೆ ಮುಳುಗಿ ಅಡಗಿತ್ತು. ಆ ಗರಿಯನು ಬಾಣವನು ಅರಸಲುಂಟೆ, ಕೂಡಲಚೆನ್ನಸಂಗಾ ನಿಮ್ಮಲ್ಲಿ?