Index   ವಚನ - 753    Search  
 
ಇದ್ದು ಬದ್ಧನಲ್ಲ, ಸುಳಿದು ಸೂತಕಿಯಲ್ಲ, ಆವ ಸಂಗವೂ ಇಲ್ಲದ ನಿಜೈಕ್ಯನು. ಬೇಕು ಬೇಡೆನ್ನದೆ, ಅಳಿದುಳಿದು ಕರ್ಪುರದ ಗಿರಿಯನುರಿ ತಾಗಿದಂತೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯನು.