Index   ವಚನ - 799    Search  
 
ಲಿಂಗ ಲಿಂಗವೆಂದು ಕಾಣದನ್ನಕ್ಕ, ಜಂಗಮ ಜಂಗಮವೆಂದು ಕಾಣದನ್ನಕ್ಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಅರಿವಿನೊಳಗಣ ಘನವೆ ಸುಳುಹಡಗಿದ ಸೂತಕ, ಇನ್ನಾಗದಯ್ಯಾ, ಇನ್ನಾಗದಯ್ಯಾ. ಇದು ಕಾರಣ, ಕೂಡಲಚೆನ್ನಸಂಗಮದೇವಯ್ಯ, ಸರ್ವಾಂಗ ಸಂದೇಹಿಗಳಿಗೆಂತೊಲಿವ.