ಗುರು ಉಂಟೆಂಬವಂಗೆ ಗುರುವಿಲ್ಲ,
ಲಿಂಗ ಉಂಟೆಂಬವಂಗೆ ಲಿಂಗವಿಲ್ಲ,
ಜಂಗಮ ಉಂಟೆಂಬವಂಗೆ ಜಂಗಮವಿಲ್ಲ,
ಪ್ರಸಾದ ಉಂಟೆಂಬವಂಗೆ ಪ್ರಸಾದವಿಲ್ಲ.
ಗುರುವಿಲ್ಲವೆಂಬವಂಗೆ ಗುರು ಉಂಟು,
ಲಿಂಗವಿಲ್ಲವೆಂಬವಂಗೆ ಲಿಂಗ ಉಂಟು,
ಜಂಗಮವಿಲ್ಲವೆಂಬವಂಗೆ ಜಂಗಮವುಂಟು,
ಪ್ರಸಾದವಿಲ್ಲವೆಂಬವಂಗೆ ಪ್ರಸಾದವುಂಟು,
ಇದು ಕಾರಣ, ಕೂಡಲಚೆನ್ನಸಂಗಯ್ಯಾ,
ತಾನಿಲ್ಲೆಂಬವಂಗೆ ತಾನುಂಟು.