Index   ವಚನ - 814    Search  
 
ಎಲೆ ಶಿವನೆ, ನಿಮ್ಮಲ್ಲಿ ಸಾಲವ ಕೊಂ[ಟ್ಟು] ನಿಮ್ಮ ಶರಣ ಶಿವಲೋಕಕ್ಕೆ ಹೋದವನಲ್ಲಾ: ಪೃಥ್ವಿಯ ಸಾಲವ ಪೃಥ್ವಿಗೆ ಕೊಟ್ಹು, ಅಪ್ಪುವಿನ ಸಾಲವ ಅಪ್ಪುಗೆ ಕೊಟ್ಟು, ತೇಜದ ಸಾಲವ ತೇಜಕ್ಕೆ ಕೊಟ್ಟು, ವಾಯುವಿನ ಸಾಲವ ವಾಯುವಿಗೆ ಕೊಟ್ಟು, ಆಕಾಶದ ಸಾಲವ ಆಕಾಶಕ್ಕೆ ಕೊಟ್ಟು ಪ್ರಸಾದವನಾರಿಗೆಯೂ ಕೊಡಲಿಲ್ಲೆಂದು ಕೂಡಲಚೆನ್ನಸಂಗನಲ್ಲಿ ಹೂಣೆಹೊಕ್ಕ ಶರಣಂಗೆ ಮಿಗೆ ಮಿಗೆ ನಮೋ ನಮೋಯೆಂಬೆ.