Index   ವಚನ - 819    Search  
 
ಉಭಯ ಕಾಮ, ಉಭಯ ಶಕ್ತಿ, ಉಭಯ ಆಶ್ರಮವು, ಅನಾಶ್ರಮವು, ಉಭಯ ತಾನೆ ಪ್ರಸಾದಿ. ಉಭಯನಾಮದ ಮೇಲೆ ನಾಮವಾದುದನು ಲಿಂಗದೇಹಿಯೆಂಬಾತಂಗರಿಯಬಾರದು. ಇದು ಕಾರಣ, ಕೂಡಲಚೆನ್ನಸಂಗಾ, ನಿಮ್ಮ ಪ್ರಸಾದಿಗಲ್ಲದೆ ಅರಿಯಬಾರದು.