Index   ವಚನ - 820    Search  
 
ಸರ್ಪದಷ್ಟವಾದರೆ ಗಾರುಡವುಂಟು, ಪ್ರಸಾದದಷ್ಟವಾದರೆ ಗಾರುಡವಿಲ್ಲ. ಅಂಗದ ಕೈಯಲಾದುದ ಲಿಂಗಕ್ಕೆ ಕೊಡಲಿಲ್ಲ. ಲಿಂಗದ ಕೈಯಲಾದುದ ಅಂಗಕ್ಕೆ ಕೊಡಲಿಲ್ಲ. ಲಿಂಗದ ಒಡಲೆಂಬರು, ಲಿಂಗಕ್ಕೆ ಒಡಲುಂಟೆ? ಈ ಉಭಯಸಂಗ ಕೂಡಲಚೆನ್ನಸಂಗಾ ನಿಮ್ಮಲ್ಲಿ ವಿಚಾರಿಸೂದು ಮಹಾಘನ ತಾನು.