Index   ವಚನ - 839    Search  
 
ರವಿಯ ಕಿರಣಂಗಳ ರಮಿಸದೆ ಪಾಲಿಸದೆ ಆಲಿಸದೆ ಎಂದೂ ನಿಂದುದಾಗಿ, ಹಿಮಕರಾದಿಗಳನು ಮನಸ್ತಂಭನೆಗೆ ತಾರದೆ ನಿಂದುದಾಗಿ, ದಿನಕರ ಅಬೋಧ ಸ್ತಂಭಗಳ ಅರ್ಪಿತವೆನ್ನದೆ ಆಯಿತ್ತಾಗಿ, ಘನಮನವೇದ್ಯ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಾ ಆನೆನ್ನದ ಪ್ರಸಾದಿ.