Index   ವಚನ - 840    Search  
 
ಆಧಾರಾಧೇಯ ಸೊಮ್ಮು ಸಂಬಂಧವಿಲ್ಲದ ಪ್ರಸಾದಿ, ಭೋಗ ಅಭೋಗಂಗಳ ಸಾರಾಯವಿಲ್ಲದ ಪ್ರಸಾದಿ, ಕ್ರಿಯಾಮೋಹಿತದ, ನಿಃಕ್ರಿಯಾನಿರ್ಮೋಹಿತದ, ಎರಡರ ಭೇದವನು ಶರೀರಾರ್ಥಕ್ಕೆ ಹೊದ್ದಲೀಯದೆ ಜಂಗಮದಲ್ಲಿ ನಿವೇದಿಸಿ ಲಿಂಗಲೀಯವಾದ ಪ್ರಸಾದಿ, ಚತುಷ್ಟಯಂಗಳ ಜಿಹ್ವಕ್ಕೆ ತಲೆದೋರದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಸರ್ವಾಂಗಲೀಯವಾದ ಪ್ರಸಾದಿ.