Index   ವಚನ - 842    Search  
 
ಮನ ಮತವಲ್ಲದೆ, ಸಯದಾನ ಮತವಲ್ಲದೆ, ಶರೀರಾರ್ಥದಲ್ಲಿ ದ್ರವ್ಯವಂತನಲ್ಲದೆ, ಅರ್ಪಿತಮುಖವರಿತ ಪ್ರಸಾದಿ, ಸಕೀಲಸುಖವಳಿಯದ ಪ್ರಸಾದಿ, ಶೋಣಿತ ಇಚ್ಛಾದಿಗಳಳಿದ ಪ್ರಸಾದಿ, ನಾದ ಬಿಂದುವಿನ ಪರಿಭಾವವಳಿದ ಪ್ರಸಾದಿ. ಪ್ರಸಾದವೆ ಭಾವ, ಪ್ರಸಾದವೆ ನಿರ್ಭಾವ, ನಡೆ ನುಡಿ ಚೈತನ್ಯ ಆಳಾಪ, ಸಂಗ ಸುಸಂಗ ಮಹಾಸಂಗ ಘನಸಂಗದಲ್ಲಿ ಮನನಿಂದ ಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಮದೇವಾ ಶಬ್ದಾರ್ಥದಲ್ಲಿ ಮನನಿಂದ ಪ್ರಸಾದಿ.