Index   ವಚನ - 841    Search  
 
ಪದಾರ್ಥವೆತ್ತ? ಪ್ರಸಾದವೆತ್ತ? ಪದಾರ್ಥವೇ ಪ್ರಸಾದ. ಈ ಎರಡರ ಮನಮಥನವಿಲ್ಲದ ಪ್ರಸಾದಿ, `ಮಧ್ಯಂ ದೇವದತ್ತಂ ಮಧ್ಯಂ ಭುವನಸಂಗ'ವಿಲ್ಲದ ಪ್ರಸಾದಿ, ಪ್ರಸಾದ ಪಾಕವ ವಿವರವನು ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿಯೇ ಬಲ್ಲ.