Index   ವಚನ - 860    Search  
 
ಸಮತೆ ಸಯವಾದ ಶರಣಂಗೆ ಅರಿವ ಮರೆಯಲುಂಟೆ? ಉಪಮೆ ನಿಃಸ್ಥಲವಾದ ಶರಣಂಗೆ ಸಬ್ದಸಂದಣಿ ಉಂಟೆ? ಅಖಂಡಿತ ಲಿಂಗಕ್ಕೆ, ಅಪ್ರಮಾಣ ಶರಣಂಗೆ ಸೀಮೆ ಸಂಬಂಧವೆಂಬ ಸಂಕಲ್ಪವುಂಟೆ? ಇದು ಕಾರಣ, ಸುಳುಹಿಂಗೆ ಭವವಿಲ್ಲ, ಬಂಧನವಿಲ್ಲ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ.